ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರಾದ ನಮ್ಮ ನಾಮಧಾರಿ ಸಮುದಾಯದ ಯುವಕರು ಉದ್ಯೋಗದ ನಿಮಿತ್ತ ಊರಿನಿಂದ ಹೊರಹೋದಂತವರು ಇಂದು ಅವರವರ ಪ್ರರಿಶ್ರಮದಿಂದ ಮತ್ತು ಹಿರಿಯರ ಆಶೀರ್ವಾದದಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಸ್ವಂತ ನೆಲೆ ಕಂಡುಕೊಂಡಿದ್ದಾರೆ.ಕೆಲವರು ನೂರಾರು ಜನರಿಗೆ ಉದ್ಯೊಗ ನೀಡಿ ಹಲವಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಇನ್ನು ಕೆಲವರು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಹೊಂದಿದ್ದು ನೇಮಕಾತಿ ಮತ್ತು ಆಡಳಿತ ವಿಭಾಗದಲ್ಲಿ ತಮ್ಮದೇ ಆದ ಹಿರಿಮೆ ಹೊಂದಿದ್ದಾರೆ.ಇವರೆಲ್ಲರು ವಿವಿಧ ರೀತಿಯ ಸಮಾಜ ಸೇವೆಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಇಂದಿನ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸಂಪರ್ಕಿಸಿತ್ತಿರುವ ಇಂತಹ ಸೇವಾ ಮನೋಭಾವ ಹೊಂದಿರುವ ಸಮಾನ ಮನಸ್ಕ ಯುವಕರ ಮನದಾಳದ ಇಂಗಿತವನ್ನು ಮನಗಂಡು ನಮ್ಮ ನಾಮಧಾರಿ ಸಮುದಾಯದ ಯುವಕರಲ್ಲಿ ಒಗ್ಗಟ್ಟು ಮೂಡಿಸಲು ಮತ್ತು ಸಮುದಾಯದ ಒಳತಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಲು ಈ ವೇದಿಕೆಯನ್ನು ಸ್ಥಾಪಿಸಲಾಗಿದೆ.
ನಮ್ಮ ವೇದಿಕೆಯು ನೊಂದಾಯಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕರ್ನಾಟಕ ಸಂಘಗಳ ಅಧಿನಿಯಮ 1960 ರ ಅಡಿಯಲ್ಲಿ ನೊಂದಣೆ ಆಗಿರುತ್ತದೆ. ವೇದಿಕೆಯು ತನ್ನದೇ ಆದ ನೊಂದಾಯಿತ ನಿಯಮ ( Approved Bye-Laws ) ಹೊಂದಿರುತ್ತದೆ.ಪ್ರತಿಯೊಂದು ಕಾರ್ಯಗಳನ್ನು ವೇದಿಕೆಯ ನಿಯಮಗಳಂತೆ ನೆರವೇರಿಸಲಾಗುತ್ತದೆ. ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ (ರಿ) ಯ ಧ್ಯೇಯೋದ್ಧೇಶಗಳು
- ನಾಮಧಾರಿ ಸಮುದಾಯದ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ, ಅಭಿವೃದ್ದಿಗೆ ಪೂರಕವಗುವಂತಹ ವಿವಿಧ ರೀತಿಯ ಮೂಲಕ ನಾಮಧಾರಿ ಸಮುದಾಯದ ಸರ್ವಾಂಗೀಣ ಉನ್ನತಿಗೆ ಶ್ರಮಿಸು ವುದು.
- ಜನತೆಯಲ್ಲಿ ಅಂಧ ಶ್ರದ್ಧೆ,ಮೂಡನಂಬಿಕೆ,ಅಜ್ಞಾನ ,ನಿರಕ್ಷರತೆ ಹೋಗಲಾಡಿಸಲು ಸಭೆ,ಸಮಾರಂಭ,ವಿಚಾರಗೊಷ್ಠಿ,ಕಮ್ಮಟ, ಸಮ್ಮೇಳನಗಳನ್ನು ಏರ್ಪಡಿಸುವುದು.
- ಮಹಿಳೆಯರ ಉನ್ನತಿಗೆ ಅಗತ್ಯವಾದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
- ಜೀವನದಲ್ಲಿ ವೈಜ್ಞಾನಿಕ ಚಿಂತನೆಗೆ ಅವಶ್ಯಕವಾದ ಸಭೆಗಳನ್ನು ನಡೆಸುವುದು, ಪುಸ್ತಕಗಳನ್ನು ಪ್ರಕಟಿಸುವುದು.
- ಇಂದಿನ ಅಗತ್ಯತೆಗೆ ಅವಶ್ಯಕವಾದ ವನಮಹೋತ್ಸವ, ಶುಭ್ರ ಪರಿಸರ ನಿರ್ಮಾಣ,ಶುಭ್ರ ಜೀವನ,ರಕ್ತದಾನ ಕಾರ್ಯಕ್ರಮ,ನೇತ್ರದಾನ,ನೇತ್ರ ಚಿಕಿತ್ಸೆ,ಆರೋಗ್ಯ ಶಿಭಿರ,ಕುಟುಂಬಯೋಜನಾ ಶಿಭಿರ ಮೊದಲಾದ ಉಚಿತ ಸಲಹಾ ಕೇಂದ್ರ, ಶಿಬಿರಗಳನ್ನು ಸ್ಥಾಪಿಸುವುದು ಹಾಗೂ ನಡೆಸುವುದು.
- ನಾಡಿನ ಬಡ ಜನತೆಗೆ ಉಚಿತ ಆಸ್ಪತ್ತ್ರೆ,ಆರೋಗ್ಯ ಸಲಹಾ ಕೇಂದ್ರ,ಕುಟುಂಬ ಸಲಹಾ ಕೇಂದ್ರಗಳನ್ನು ಸ್ಥಾಪಿಸುವುದು.
- ನಾಡಿನ ಸಾಹಿತ್ಯ, ಸಾಂಕೃತಿಕ ಸಂಬಂದವಾದ ಗ್ರಂಥಗಳನ್ನು,ವಿಚಾರ, ವಿಮರ್ಶಾ ಪ್ರಬಂಧಗಳನ್ನು ಪ್ರಕಟಿಸುವುದು.ಸಮ್ಮೇಳನ,ವಿಚಾರಗೋಷ್ಠಿ ಮೊದಲಾದವುಗಳನ್ನು ಏರ್ಪಡಿಸುವುದು.
- ನಾಮಧಾರಿ ಜನತೆಯಲ್ಲಿ ಹಾಗೂ ಸದಸ್ಯರಿಗೆ ಶಿಕ್ಷಣಿಕ,ಕ್ರೀಡಾ ಚಟುವಟಿಕೆ,ವೈಜ್ಞಾನಿಕ,ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
- ನಾಮಧಾರಿ ಜನರಲ್ಲಿ ಕ್ರೀಡಾಭಾವನೆ ಬೆಳೆಸಲು ದೈಹಿಕವಾಗಿ ಜನರು ಬಲಯುತರಾಗಲು ಅಗತ್ಯವಾದ ಕ್ರೀಡೆಗಳನ್ನು ಆಡಲು ಅಂದರೆ ಕ್ರಿಕೆಟ್, ಕಾಲ್ಛೆಂಡು.ಟೆನ್ನಿಸ್,ಬ್ಯಾಡ್ಮಿಂಟನ್,ಕಬಡ್ಡಿ, ಚೆಸ್ ಮೊದಲಾದವುಗಳನ್ನು ಪ್ರೋತ್ಸಾಹಿಸುವುದು ಮತ್ತು ತತ್ಸಂಬಂದಿತವಾಗಿ ಕ್ರೀಡಾಕೂಟಗಳನ್ನು,ಸ್ಪರ್ಧೆಗಳನ್ನು ನಡೆಸುವುದು.
- ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ಚತುರತೆಯನ್ನು ಹೆಚ್ಚಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡು ಉದ್ಯೋಗ ಪಡೆಯಲು ಸೂಕ್ತ ಮಾರ್ಗದರ್ಶನ ನೀಡುವುದು.
- ನಾಮಧಾರಿ ಸಮುದಾಯದ ವಧು-ವರರ ಮಾಹಿತಿ ಕೇಂದ್ರ ಮತ್ತು ಉದ್ಯೋಗ ಮಾಹಿತಿ ಕೇಂದ್ರ ಸ್ಥಾಪಿಸುವುದು.
- ನಾಮಧಾರಿ ಯುವ ವಾರ್ತೆ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸುವುದು.
- ನಾಮಧಾರಿ ಸಮುದಾಯದ ಜನರಲ್ಲಿ ಯಾವುದೇ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದಲ್ಲಿ ಅಂತವರನ್ನು ಸನ್ಮಾನಿಸುವುದು. ಹಾಗೂ ಇನ್ನಿತರ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.